Sunday 30 August, 2009

ಪಿಲ್ಮಿಲಿ ನಮ್ಮ ಜೀವನ ಕಾಣ್ತಾ?

...ಹಾಂಗೆ ಮಾಣಿಗೆ ಟ್ರಾನ್ಸ್‌ಫರ್ ಆತು. ಮಾಣಿಯ ಮನೆ ಹತ್ತರೆ ಹೇಳಿ ಆ ಜೀಯೆಮ್ಮಿಂಗೆ ಆರು ಕುತ್ತಿಕೊಟ್ಟದೋ ಎನಗಂತೂ ಗೊಂತಿಲ್ಲೆ. ಬಾಣಲೆಂದ ಸೀದ ಹೋಗಿ ಒಲಗೆ. ಕೊಡೆಯಾಲಂದ ಇಡುಕ್ಕಿದವು ನೆಲ್ಯಾಡಿಗೆ. ಕೊಡೆಯಾಲಲ್ಲಿ ಒಂದು ತರದ ಕಷ್ಟ ಆದರೆ ನೆಲ್ಯಾಡಿಲಿ ಇನ್ನೊಂದು ತರ.
ಹುಂ. ಅಪ್ಪದೆಲ್ಲಾ ಒಳ್ಳೆದಕ್ಕೆ, ಎಂತ ಹೇಳಿ ಕೇಳ್ತಿರೊ? ಮಾಣಿಯ ಮನೆಲಿ ಪಾಲಾತು. ಮನೆಗೆ ಆಚಕರೆ ಹೇಳಿ ಹೇಂಗೆ ಹೆಸರು ಬಂದದು ಹೇಳಿ ಗೊಂತಿಕ್ಕು ನಿಂಗೊಗೆ.( ಒಪ್ಪಣ್ಣನ ಬ್ಲೋಗಿಲಿ ಓದಿಪ್ಪಿ.) ಮೊದಲು ಆಚಕರೆ ಹೇಳಿ ಹೇಳಿಗೊಂಡಿತ್ತ ಮನೆ ಈಗ ಈಚಕರೆ ಹೇಳುವ ಹಾಂಗಾಯ್ದು (ಎಂಗೊಗೆ ಈಚಕರೆಯ ಹಳೆ ಮನೆ, ಅಪ್ಪಚ್ಚಿಗೆ ಆಚಕರೆಲಿ ಹೊಸಮನೆ). ಆಚಕರೆ ಈಚಕರೆ ಆದಪ್ಪಗ ಈಚಕರೆಗೆ ಇದ್ದ ಆಚಕರೆ ಹೇಳುವ ಹೆಸರಿಂಗೆ ಎಂತ ಮಾಡುದು? ಹಾಂಗೆ ಹೇಳಿ ಆಚಕರೆ ಮಾಣಿ 'ಈಚಕರೆ ಮಾಣಿ' ಹೇಳಿ ಆಂಯಿದಾಯಿಲ್ಲೆ. ಬಿಡಿ., ವಿಷಯಕ್ಕೆ ಬಪ್ಪ.
ಈಗ ಮನೆಲಿ ಅಪ್ಪ, ಅಮ್ಮ, ಅಜ್ಜಿ ಮಾತ್ರ ಪಾಲಿಂಗೆ ಸಿಕ್ಕಿದ್ದು ! ಈ ಪರಬ್ಬಂಗೊ ಮಾತ್ರ ಎಂತ ಮಾಡ್ಲೆಡಿಗು? ಹಾಂಗಾಗಿ ಮಾಣಿ ಮನೆಂದ ಹೋಗಿ ಬಪ್ಪದು ಒಳ್ಳೆದೇ! ಈ ಎಲ್ಲಾ ಗಲಾಟೆಲಿ ಪುರ್ಸೊತ್ತೇ ಆಯಿದಿಲ್ಲೆ ಇದಾ...
ಈಗ ಪುರುಸೊತ್ತು ಸಿಕ್ಕಿತ್ತದ ನಿಂಗಳತ್ರೆ ಮಾತಾಡ್ಲೆ ! ಒಪ್ಪಣ್ಣ ಬಯ್ಕೊಂಡಿತ್ತಿದ್ದ. 'ಎಲ್ಲಿ ಓಡಿ ಹೋದ ಈ ಮಾಣಿ' ಹೇಳಿಗೊಂಡು. ಅವಂಗೆಂತ ಗೊಂತು. ಓಡಿ ಹೋದರೆ ಪುಟ್ಟಕ್ಕ ಜೀವಲ್ಲಿ ಬಿಡ ಹೇಳಿ ! ಹ್ಹೆ. ಹ್ಹೆ.
ಹೇಳ್ತ ಹಾಂಗೆ ಒಂದು ಪಿಲ್ಮು ನೋಡಿದೆ. ಮಾಣಿಗೆ ಪಿಚ್ಚರಿನ ಮರ್ಲು ಒಂಚೂರೂ ಇಲ್ಲೆ. ಎಲ್ಲಾ ಈ ಪುಟ್ಟಕ್ಕನ ಒತ್ತಾಯಕ್ಕೆ. ಎಂತದೋ 'ಕಮೀನೇ' ಅಡ. ಎಂತರ ಅರ್ಥ ಹೇಳಿ ಅದರತ್ರೆ ಕೇಳುವ ಧೈರ್ಯ ಮಾಡಿದ್ದಿಲ್ಲೆ. ಬಪ್ಪಗ ಪೃಷ್ಠ ರಕ್ಷಕ ಕವಚ ( ಅದೇ ಒಪ್ಪಣ್ಣನ ತೋಟದ ಹಾಳೆ !) ಮರತ್ತು ಬೈಂದೆ. ಆದರೆ ಪಿಲ್ಮು ಲಾಯ್ಕಿತ್ತು. ಆರೋ ವಿಶಾಲ ಭಾರದ್ವಾಜನ ಪಿಲ್ಮಡ.. ಅದೇ ನಮ್ಮ ಸಾರಡಿ ತೋಡಿಂದ ಮೂರುವರೆ ಮೈಲು ಮೇಗಂತಾಗಿ ಇತ್ತಿದ್ದವು ಮದಲಿಂಗೆ. ಈಗ ಬೊಂಬಾಯಿಲಿ ಸೆಟ್ಲ್ ಆಯಿದವು. ಅವರ ಪಾಲುದಾರಕ್ಕೊ ಈಗಳೂ ಇದ್ದವಲ್ಲಿಯೇ !
ಶಾಹಿದು ಕಪೂರು ಎರಡು, ಪ್ರಿಯಾಂಕ ಚೋಪ್ರಾ ಒಂದು. ಒಟ್ಟು ಮೂರು ಜೆನ ಮುಖ್ಯಪಾತ್ರಲ್ಲಿ. ರೈಲು ಕಂಡಕ್ಟ್ರನ ಅಮಳು ಮಕ್ಕೊ ಇಬ್ರು ಅವರವರ ಸುಖಜೀವನದ ಕನಸು ಕಾಣ್ತಾ ಕಾಣ್ತಾ ಎಂತದೆಲ್ಲಾ ಎಡವಟ್ಟು ಮಾಡಿಗೊಂಡು. ಒಳ್ಳೆ ದಾರಿ ಹೇಳಿ ಅಲ್ಲದ ದಾರಿಗಳಲ್ಲಿ ಹೋಗಿಯೊಂಡು ಅಂತೂ ಒಂದು ಹದಕ್ಕೆ ಬಪ್ಪ ಕಥೆ. ಭಯಂಕರ ಪೆಟ್ಟು-ಗುಟ್ಟು ಇದ್ದು. ಇಷ್ಟು ಸಣ್ಣ ಬೆಡಿಂದ ಹಿಡುದು ಓ‌ಓ‌ಓ‌ಓ‌ಓ‌ಓ‌ಓ‌ಓ‌ಓ‌ಓ‌ಓ ಅಷ್ಟು ದೊಡ್ಡ ಬೆಡಿ ವರೆಗೆ ಎಲ್ಲವನ್ನೂ ತೋರ್ಸಿದ್ದವು. ಪಿಸ್ತೂಲು, ರಿವಾಲ್ವರು, ಸ್ಟೆನ್ ಮೆಷಿನ್ ಕಾರ್ಬೈನ್, ಎಸ್ ಎಲ್ ಆರ್, ಎಲ್ ಎಂ ಜಿ, ಮೆಷಿನ್ನು ಗನ್ನು.. ಇನ್ನು ಹೀಂಗೆ ಸುಮಾರು.
ಅರೆ.., ಮಾಣಿಗೆ ಹೇಂಗೆ ಗೊಂತು ಈ ಬೆಡಿ ಸಂಗತಿ? ಟೆರರಿಷ್ಟು ಗ್ರೂಪು ಮಿನಿ ಗೊಂತಿದ್ದೋ ಹೇಂಗೆ ಹೇಳಿ ತನಿಕೆ ಮಾಡೆಡಿ ಆತೋ ! ಆನು ಎನ್‌ಸಿಸಿಲಿತ್ತದಲ್ದಾ? ಕೇಂಪಿಂಗೆಲ್ಲಾ ಹೋಯ್ದೆ ಇದ. ಎನ್ನ ಬೆಟಾಲಿಯನ್ನಿಲಿ ಸಿ ಸರ್ಟಿಪಿಕೇಟು ಬಿ ಗ್ರೇಡಿಲಿ (ಎಲ್ಲೋರೂ ಸಿ ಗ್ರೇಡು, ಅದೂ ಭಾರೀ ಕಷ್ಟಲ್ಲಿ) ಪಾಸು ಮಾಡಿ ಕೊನೆಗೆ ಅದರದ್ದೇ ಕೋಟಲ್ಲಿ ಅಲ್ದೋ ಆನು ಎಂಎಸ್ಸಿಗೆ ಹೋದದ್ದು ('ಹೇಳಿಗೊಂಬದೂ' ಹೇಳಿ ಅಲ್ಲ, ಆದರೂ ಹೇಳುದು... ). ಹಾಂಗೆ ನೆಂಪಾತದ.
ಜೀವನ ಹೇಳಿರೆ ಹಾಂಗೆ ಅಲ್ದೋ? ಇದ್ದ ಹಾಂಗೆ ಇದ್ದರೆ ಅದರ ಮನುಷ್ಯ ಹೇಳುಗೋ ? ತಪ್ಪಾವ್ತು. ಅದರ ತಿದ್ದಿ ಸರಿ ಮಾಡಿಗೊಂಡು ಮುಂದೆ ಹೋಯೆಕ್ಕಲ್ಲದಾ? ನಮ್ಮ ತಪ್ಪಿಂದ ನಾವು ಬುದ್ದಿ ಕಲ್ತರೆ ಒಳ್ಳೆದು. ಒಪ್ಪಣ್ಣ ಹೇಳಿಗೊಂಡಿತ್ತಿದ್ದ, ಇನ್ನೊಬ್ಬರ ತಪ್ಪಿಂದ ಬುದ್ದಿ ಕಲಿವದು ಪೈಲಟ್ಟುಗೊ ಮಾಂತ್ರ ಹೇಳಿ.

5 comments:

  1. ಬ್ಲಾಗು ಚೆಂದ ಇದ್ದು ಮಾಣಿ .. ಹೀಂಗೆ ಬರಕ್ಕೊಂದು ಹೋದರೆ ಸಪೋರ್ಟು ಸಿಕ್ಕುತ್ತು.. ಮಂಡೆ ಬೆಚ್ಚ ಮಾಡದ್ದೆ ಬರೆ. ಚೆಂದಕ್ಕೆ ಬರೆತ್ತೆ ನೀನು ಆತಬ್ಬೋ ... ಮತ್ತೆ ಎನಗೆ ಪದ್ಮನಾಭನ ಬ್ಲಾಗಿಲಿಪ್ಪ ಪುಸ್ತಕ ಎನಗೊಂದು ಕಳ್ಸಿ ಕೊಡು.. ನಿನ್ನ a/c no. ಎಸ್ . ಎಂ .ಎಸ್ ಮಾಡಿದರೆ ದುಡ್ಡು ಅದಕ್ಕೆ ಹಾಕುತ್ತೆ . ಆಗದಾ ?
    ಹಾಂ.. ಒಂದೊಂದರಿ ಪಿಲ್ಮಿಲಿ ಜೀವನ ಕಾಣ್ತು ಆತಾ...

    ReplyDelete
  2. Elaa engala maani laika baretta. Odi ennashtakke nege madikondiddara nodi hatre koodavu ee manige entatu heli nege madikondavu. baretta iru, engo eechakareli koodu odikondirteyo...:-)

    ReplyDelete
  3. ಏ ಮಾಣಿ ಬಾವ,
    ಎಂತ ಕಾಂಬಲೇ ಇಲ್ಲೆಪ್ಪಾ ಹೇಳಿ ಗ್ರೇಶಿಗೊಂಡಿಪ್ಪಗ ಬಂತಿದಾ ಈ ಶುದ್ದಿ! ನೂರು ಒರಿಶ ಆಯಿಸ್ಸು ನಿನಗೆ.

    ಯನ್ಸೀಸಿಲಿ ಹಿಡುದ ಬೆಡಿ ಈಗಳೂ ಬಿಟ್ಟಿದಿಲ್ಲೆಯೋ ಹೇಳಿಗೊಂಡು ಒಂದು ಕನುಪ್ಯೂಸು ಬಯಿಂದು.
    ಕೆಲವು ಸರ್ತಿ ಈಗಳೂ ಬೆಡಿ ಹೊಟ್ಟುಸುತ್ತೆ ಅಡ, ಪುಟ್ಟಕ್ಕ ಹೇಳಿಗೊಂಡಿತ್ತು!

    ಲಾಯ್ಕಾಯಿದಬ್ಬೊ ಬರದ್ದು. :-)

    ReplyDelete
  4. ಮಾಣಿ ಎಂತ ಇತ್ಲಾಗಿ ಬಾರದ್ದದು ? ಹೀಗಾದರೆ ಆಗ... ಇಷ್ಟು ಚೆಂದ ಬರವೋರು ಸುಮ್ಮನೆ ಕೂಪಲಾಗ ... ಬರಕ್ಕೊಂಡೆ ಇರೆಕ್ಕದ...

    ReplyDelete
  5. ಇನ್ನೊಬ್ಬರ ತಪ್ಪಿಂದ ಬುದ್ದಿ ಕಲಿವದು ಪೈಲಟ್ಟುಗೊ ಮಾಂತ್ರ ಹೇಳಿ.... ಹಹಹ.... ಭಾರಿ ಚಂದಾ ಇದ್ದು ಬರಹ.. ನಂಗೆ ನಿಂಗಳ ಕಡೆ ಹವಿಗನ್ನಡ ಬತ್ತಿಲ್ಲೆ..ಅದ್ಕೆ ನಮ್ ಬದಿ ಹವಿಗನ್ನಡದಲ್ಲೇ ಕಾಮೆಂಟ್ ಹಾಕ್ತಾ ಇದ್ದಿ.. ಬೇಜಾರ್ ಮಾಡ್ಕಂಬ್ಲಿಲ್ಲೇ...

    ReplyDelete