Friday 12 June, 2009

ಲೊಳಲೊಟ್ಟೆ- ಭಾಗ ೨

ಒಪ್ಪಣ್ಣ ಅಂತೂ ಈ ಬ್ಲಾಗಿನ ವರೆಗೂ ತಂದು ಬಿಟ್ಟಿದ. ಊರಿಲಿಪ್ಪ ನಾಲ್ಕು ಜನಂಗೊಕ್ಕೆ ಹೇಳಿ ಶಿಫಾರಸ್ಸು ಬೇರೆ ಮಾಡ್ಸಿದ್ದ. ಅವ್ವೂದೇ ಆಚಕರೆ ಮಾಣಿ ಈಗ ಬರೆಗು, ಮತ್ತೆ ಬರೆಗು ಹೇಳಿ ತುದಿಕ್ಕಾಲಿಲಿ ಕೂದುಗೊಂಡು ಕಾಯ್ತಾ ಇದ್ದವಿದ. ಆನೂದೇ ಒಂದು ಹುಂಬತನಲ್ಲಿ ಒಪ್ಪಣ್ಣನ ಒತ್ತಾಯಕ್ಕೆ ಬರವಲೆ ಕೂದದ್ದೂ ಅಪ್ಪು. ಆದರೆ ಕೂದವಂಗೆ ಬರವಲೆ ಎಂತರ ಹೇಳಿಯೇ ಅರಡಿತ್ತಿಲ್ಲೆ ಹೇಳಿ ! ಎಂತರ ಮಾಡುದು ? ಹಾಂಗಾಗಿಯೇ ಆಚಕರೆ ಮಾಣಿ ಹೆರಟ್ಟದ್ದರ ಬಗ್ಗೆ ಈ ಎರಡನೇ ಪ್ರಸ್ತಾವನೆ..!
ಎಲಾ ಇವನ..ಬ್ಲೋಗು ಸ್ಟಾರ್ಟ್ ಮಾಡಿ ಬರವಲೆ ಎಡಿತ್ತಿಲ್ಲೆ ಹೇಳಿದರೆ ಎಂತ ಇದು ಸಮ ಇಪ್ಪದು ಆಪಾ ಹೇಳಿ ಕೇಳ್ತಿರಾ? ಒಂಚೂರು ಉದಾಸನ ಇದಾ..ಎಷ್ಟೂ ಹೇಳಿರೆ, ಒಪ್ಪಣ್ಣನ ಬತ್ತಿಗೊಕ್ಕೆ ಇತ್ಲಾಗೆ ಪಟಾಕಿ ಮಡುಗುವ ಹೇಳಿದರೂ ಬಿಡದ್ದಷ್ಟು. ಪುರುಸೊತ್ತೂ ಇಲ್ಲೆ ಬಿಡಿ..(ಫಿಲ್ಮ್ ನೋಡಿಗೊಂಡು ಕೂದರೂ, ಟಯರ್ ಬೆಳೆದರೂ ..). ಅದರಲ್ಲೂ ಪುಟ್ಟಕ್ಕ ಅಂತೂ ಬರೆಯದ್ದಕ್ಕೆ ಕ್ಲಾಸು ತೆಕ್ಕೊತ್ತಾ ಇದ್ದು.. 'ಬರೆ ಬರೆ' ಹೇಳಿ, ಞಂಕ್ಕು ಞ..ಛೇ ಎಂತಕ್ಕಾರೂ 'ಬರೆತ್ತೆ' ಹೇಳಿ ಹೆರಟನೋ. ಆನೋ ವಿಷಯಕ್ಕೆ ಒದ್ದಾಡ್ತಾ ಇದ್ದೆ..ಅವಕ್ಕೆ ಆಟ..ಎನಗೋ ಪ್ರಾಣ ಸಂಕಟ..
ಬರವದು ಹೇಳಿರೆ ಅದೆಂತಾ ಕಾಪಿ ಗೀಚಿದ ಹಾಂಗ? ಬರೆ ಆದರೆ ನಾಲ್ಕು ಎಳೆದಿಕ್ಕುಲಕ್ಕು..ಅಥವಾ ಬರೆ ಕಡುದಿಕ್ಕುಲಕ್ಕು.. ಆದರೆ ಈ ಬರವದು ಇದ್ದಲ್ದಾ..! ಕಷ್ಟ..ಕಷ್ಟ.
ಆದರೆ ಬರವಲೆ ಕೂದಪ್ಪಗ ಎಲ್ಲ ಒಂದೊಂದಾಗಿ ನೆಂಪಾವ್ತು. ಶಾಲೆ, ಕಾಲೇಜು ದಿನಂಗೊ, ನಂತರದ ಓಡಾಟಂಗೊ, ಒದ್ದಾಟಂಗೊ, ಮಾಣಿಗೆ ಅಯಾಚಿತವಾಗಿ ಉದ್ಯೋಗ ಸಿಕ್ಕಿದ್ದು, ಮದಲಾಣ ಹೆದರಿಕೆಗೊ ಎಲ್ಲಾ ಮಾಯ ಆಗಿ ಜೀವನಲ್ಲಿ ಒಂದು ರಜ್ಜ ಧೈರ್ಯ ಬಂದದು, ಹೀಂಗೆ...ಹೇಳುಲೆ ಹೋದರೆ ಪುರಾಣ ಬರವ ಮಟ್ಟಿಂಗೂ..ಈಗ ಎಲ್ಲಾ ಬ್ಲೋಗಿಲೂ ಹಾಂಗೆಯೇ ಅಲ್ದಾ? ಉದಿಯಪ್ಪಾಗ ಹೇತದ್ದರಿಂದ ಹಿಡಿದು ಇರುಳು ಉಚ್ಚೆ ಹೊಯ್ದು ಮನುಗುವ ವರೆಗೂ, ಕೆಲವೊಂದರಿ ಮನುಗಿದ ನಂತ್ರದ ಕನಸು, ಗೊರಕ್ಕೆಗೂ ಬ್ಲೋಗು ಹೇಳುದು ಒಂದು ಸ್ಟೇಷನ್ ಇದಾ..! ಆದರೂ ಎನಗೆ ಬರವಲೆ ವಿಷಯ ಸಿಕ್ಕುತ್ತಿಲ್ಲೆ ಹೇಳುದು ಮಾತ್ರ ನಿಂಗೊ ನಂಬೆಕ್ಕಾದ ಲೊಟ್ಟೆ ಅಲ್ಲದ ಲೊಟ್ಟೆ..
ಬಿ. ಎಸ್ಸಿ, ಎಮ್. ಎಸ್ಸಿ ಮುಗಿವವರೆಗೂ ಪೋಲಿ, ಪಟಿಂಗ, ಯಾವದಕ್ಕೂ ಆಗದ್ದವ ಹೇಳಿ ಒಂದು ಇಮೇಜ್ ಇತ್ತಿದ್ದ ಮಾಣಿ, ಫಕ್ಕನೆ ಛೇಂಜ್ ಆದದ್ದರ ಬಗ್ಗೆ ಸ್ವತಃ ಮಾಣಿಗೇ ಆಶ್ಚರ್ಯ! ಸಂಬಂಧಿಕರೆಲ್ಲಾ ಒಬ್ಬೊಬ್ಬರಾಗಿ ಹೀಂಗೊಬ್ಬ ಮಾಣಿ ಇದ್ದ ಆಚಕರೆಲಿ ಹೇಳಿ ಗುರ್ತ ಹಿಡಿವ ಮಟ್ಟಿಂಗೆ ಬೆಳದ್ದು ಹೇಳಿರೆ ಅದೊಂದು ಪವಾಡವೇ ಅಪ್ಪು! ಒಪ್ಪಣ್ಣ, ಒಪ್ಪಕ್ಕ, ಪುಟ್ಟಕ್ಕ, ಮಾಣಿಪ್ಪಾಡಿ ಅಪ್ಪಚ್ಚಿ, ಪಾಲಾರು ಅಪ್ಪಚ್ಚಿ, ಕುಂಞ ಮಾಂವ, ತಮ್ಮಣ್ಣಪ್ಪಚ್ಚಿ ಎಲ್ಲೋರೂ ಮಾಣಿಯ ಜೀವನಲ್ಲಿ ಒಂದಲ್ಲದ್ದರೊಂದು ರೀತಿಲಿ ಪ್ರಭಾವ ಬೀರಿದ್ದವು, ಮಾಣಿ ಉದ್ಧಾರ ಅಪ್ಪಲೆ ಕಾರಣ ಆಯಿದವು. ಹಾಂಗಾಗಿ ಮಾಣಿಗೆ ಸ್ವಂತ ಸಂಬಂಧಿಕರಿಂದಲೂ, ಫ್ರೆಂಡುಗಳೆ ಹೆಚ್ಚು ಹತ್ತರೆ.
ಹಾಂಗಾಗಿ ಎನ್ನ ಹಾಂಗೇ ಎನ್ನ ಬ್ಲೋಗೂ ಒಂಚೂರು ನಿಧಾನವೆ ಸರಿ ! ಆದರೂ ಪ್ರಧಾನ. ಹಾಂಗೆ ಹೇಳಿ, ಒಂಚೂರು ಸಮಾಧಾನ ಮಾಡಿಕ್ಕೊಂಡು ಹೋಯೆಕ್ಕದ. ಹೆಜ್ಜೆಲಿ ಬಿದ್ದ ನೆಣವಿನ ಹಾಂಗೆ ಹೇಳಿ ಹೇಳದ್ದೆ ಸಮಾಧಾನಲ್ಲಿ ತೆಕ್ಕೊಂಡು ಹೋಯೆಕ್ಕು, ಹಾಂಗೇಯೇ ನಿಧಾನ ಆದರೂ ಚೆಂದಲ್ಲಿ ಬರೆವ ಹುಮ್ಮಸ್ಸಿಲಿಪ್ಪ ಮಾಣಿಯ ಪ್ರೋತ್ಸಾಹಿಸೆಕ್ಕು ಹೇಳಿ ಈ ಮೂಲಕ ಕೇಳಿಕೊಂಬದಿದ...

ಓಹೋಯ್..ಕಾಂಬ ಹಾಂಗಾದ್ರೆ..