Sunday 13 December, 2009

ತುಲು ಸಮ್ಮೇಲನೋಗ್ ಪೋತಾರ?

ಈ ಮಾಣಿಗೆ ಎಲ್ಯಾರು ಎಂತಾರು ಜೆಂಬ್ರ, ಅನಪತ್ಯ ಇದ್ದರೆ ಭಾರೀ ಸಂಭ್ರಮ... ಅಲ್ಲಿಗೊಂದಾರಿ ಹೋಯೆಕ್ಕು, ಚೆಂದ ನೋಡೆಕ್ಕು. ಮೊನ್ನೆ ಕಳ್ತದಾ ತುಳು ಸಮ್ಮೇಳನ, ಹೋಗಿತ್ತಿದ್ದೆ, ನಮ್ಮ ಪುಟ್ಟಕ್ಕಂದೇ ಕಾರ್ಬಾರಡ. ಸಮ್ಮೇಳನ ನಡಶುದೇ ಅದುವೇ ಹೇಳಿಗೊಂಡು ಇತ್ತು. ಎಂತಾ ಜೆನ ಎಂತಾ ಜೆನ.... ಕೆಲಾವು ಲಕ್ಶ ಕಳಿಗು. ಧೂಳೂ ಹೇಳಿರೆ ಧೂಳು. ಟೇಂಕರಿಲಿ ನೀರು ಬಿಟ್ಟೊಂಡಿತ್ತಿದ್ದವು. ಆದರುದೇ ಅವು ಅತ್ಲಾಗಿ ಎತ್ತುವಾಗ ಪುನಾ ಧೂಳು. ನಮ್ಮ ಗುಣಾಜೆ ಮಾಣಿಯ ಪ್ರೆಂಡು ಎಡ್ಯೂರಪ್ಪ ಬಂದಿತ್ತಿದ್ದನಡ ಉದ್ಘಾಟನಗೆ. ಆನು ಎತ್ತುವಾಗ ರಜಾ ಲೇಟ್ ಆಯಿದು.

ಆದರೆ ವೆವಸ್ತೆ ಮಾತ್ರ ತುಂಬಾ ಲಾಯಿಕ್ಕ ಆಯಿದು. ಐವತ್ತು ಸಾವಿರ ಜೆನ ಏಕ ಕಾಲಕ್ಕೆ ಉಂಬಶ್ಟು ದೊಡ್ಡ ಊಟದ ಚೆಪ್ಪರ. ಅದರ್ಲಿ ಬಪ್ಪೆ ವೆವಸ್ತೆ. ಹಾಳೆ ಬಟ್ಳು. ಅಶನ, ಸಾರು ಕೊದಿಲು, ಒಂದು ಪಾಯಿಸ, ಒಂದು ಸ್ವೀಟು. ಊಟ ಕಂಡ್ರೆ ಮಾಣಿ ಬಿಡ್ತನಾ? ಎಂತಾ ಊಟ ಭಾವ.... ಭಾರೀ ಲಾಯ್ಕ ಹೇಳಿರೆ ಭಾರೀ ಲಾಯ್ಕ ಇತ್ತು ಊಟ. (ಪುಟ್ಟಕ್ಕನ ಅಡಿಗೆಂದಲೂ ;-) )

ಮತ್ತೆ ಅಲ್ಲೇ ಮುಂದೆ ಹೋದರೆ ತುಳು ಗ್ರಾಮ ಹೇಳಿ, ಒಂದು ಕೃತಕ ಗ್ರಾಮ ನಿರ್ಮಾಣ ಮಾಡಿತ್ತಿದ್ದವು. ಒಂದೈವತ್ತು ಎಕ್ರೆ ಜಾಗೆಲಿ ತುಳು ಸಂಸ್ಕೃತಿಯ ಲೋಕ. ಬೂತಸ್ತಾನ, ದೇವರ ಕಟ್ಟೆ, ನಾಗ ಬನ, ಬೇರೆ ಬೇರೆ ಜಾತಿಯ ಜೆನಂಗಳ ಮನಗೊ, ನಲಿಕ್ಕೆಯೊವು, ಬಟ್ಟಕ್ಕೊ, ಗೌಡುಗೊ, ಪೂಜಾರಿಗೊ, ಪುರ್ಬುಗೊ, ಬ್ಯಾರಿಗೊ, ಹೀಂಗೆ. ಬರೀ ಮನೆ ಮಾಂತ್ರ ಅಲ್ಲ, ಅದರ್ಲಿ ಜೆನಂಗೊ ಕೂಡ ಇತ್ತಿದ್ದವು, ಅವರವರ್ ಜಾತಿಯ ಕೆಲಸ ಮಾಡ್ತಾ. ನಲಿಕೆಯೊವು ಒಲಿ ಕೆರಸುದು, ಬೂತ ಕಟ್ಟುವ ಸಾಮಾಗ್ರಿ ಜೋಡುಸುದು, ಪಟ್ಲೇರ್ ಪಂಚಾತಿಗೆ ನಡೆಶುದು, ಸೇನೇರ್ ಲೆಕ್ಕ ಬರವದು, ಉಗ್ರಾಣಿ ಚೈನು ಮಡುಸುದು, ಪಂಡಿತ ಸೊಪ್ಪು ನುರಿವದು, ಜೋಯಿಶ ಕವಡೆ ಹರಗುದು, ಇತ್ಯಾದಿ. ಹಾಂಗೆಯೆ ಅಂಗ್ಡಿಗೊ ಕೂಡ ಇತ್ತು. ಸುರೂವಿಂಗೆ ಕಮ್ತೆರೆನ ಅಂಗಡಿ. ಅಕ್ಕಿ ಬೆಲ್ಲ ಸಾಮಾನು. ಸೇರು ಲೆಕ್ಕಲ್ಲಿ ಮಾರಾಟ. ಒಂದು ಬಡ್ಡ ಕೊಂಕಣಿಯ ಎಲ್ಲಿಂದ ತಂದವೋ ಗೊಂತಿಲ್ಲೆ. ಟಿಪಿಕಲ್ ಕಾಮತ್ತಿನ ತೈಂದವು. ಮತ್ತೆ ಹೋಟ್ಳು, ಅದರ್ಲಿ ರೇಡಿಯ, ಭಜನಾ ಮಂದಿರ, ಸೋಡದ ಅಂಗಡಿ- ಭಾರೀ ಅಪರೂಪ ಆಗಿಪ್ಪ ಗೋಳಿ ಸೋಡ. ಸಣ್ಣಾದಿಪ್ಪಾಗ ಕುಡುದ ನೆಂಪು. ಕೈಮಗ್ಗ, ಅವಲಕ್ಕಿ ಲಾಟೆ, ದೇವಸ್ತಾನ, ಕಟ್ಟೆ, ಬೇತಾಳ, ನೇಮ, ಪೋಶ್ಟಾಪೀಸು, ಹಳೇ ಟೆಲಿಗ್ರಾಫು ಮಿಶನು, ಗಾಣಂಗೊ, ಎಣ್ಣೆ ತೆಗವದು, ಕಬ್ಬು ಅರವದು, ಫ಼್ರೆಶ್ ಕಬ್ಬಿನ ಜೂಸು, ಲಟ್ಟಣಿಗೆ ಮಾಡುದು- ಒಂದು ತೆಕ್ಕೊಂಡೆ , ಮುಂದಂಗೆ ಬೇಕಕ್ಕು ಹೇಳಿ. ಒಪ್ಪಣ್ಣ ಒಂದು ಕೈಕ್ಕುರುವೆ ತೆಕ್ಕೊಂಡ ಅಡಕ್ಕೆ ಹೆರ್ಕುತ್ತ ಹಾಂಗಿಪ್ಪದು. ಬೆಂಗ್ಳೂರಿಂಗೆ ತೆಕ್ಕೊಂಡೋಯಿದ. ಮೋರ್ ಂಗೆ ಶೋಪ್ಪಿಂಗ್ ಹೋಪಲೆಯಡ. ಅಲ್ಲಿ ಒಂದು ಹೊಸ ಟ್ರೆಂಡ್ ಸುರು ಮಾಡುವ ಅಂದಾಜಿಲಿದ್ದ. ಇಶ್ಟೆಲ್ಲ ಇದ್ದರೂ ಒಂದು ಸಂಗತಿ ಕಂಡತ್ತಿಲ್ಲೆ ಭಾವಾ... ತುಳು ಗ್ರಾಮಂಗಳಲ್ಲಿ ಮುಖ್ಯವಾಗಿ ಒಂದು ಗಡಂಗು ಇಲ್ಲದ್ರೆ ಅದು ಗ್ರಾಮವೊ?

ಅದಾ ಮುಖ್ಯ ವಿಚಾರವೇ ಮರತ್ತದಾ. ಅಟ್ಟಿಲ್-ಅರಗಣೆ ಹೇಳಿ ಆಹಾರ ಮೇಳ. ಒಂದುರೂಪಾಯಿಗೆ ಹಾಳೆ ಪ್ಲೇಟು, ಐದು ರುಪಾಯಿಯ ಕೂಪನುಗೊ. ತೆಕ್ಕೊಂಡು ಕೌಂಟರುಗಳ ಹತ್ತರೆ ಹೋಗಿ ಬೇಕಾದ್ದು ತೆಕ್ಕೋಂಬಲೆ. ಸುಕ್ರುಂಡೆ, ಸುಟ್ಟವು, ಒಡೆ, (ತಿಥಿಗಿಪ್ಪದಲ್ಲಾ... ಹ್ಹೆ ಹ್ಹೆ...) ಅವಲಕ್ಕಿ, ತಿಮರೆ ಚಟ್ನಿ, ಪುಂಡಿಗಸಿ, ಇಡ್ಲಿ ಸಾಂಬಾರು, ಶಿವಳ್ಯೋರ ಮಡ್ಡಿ, ಸೇಮಗೆ ಕಾಯೆಲು, ಚರ್ಮುರಿ, ಹಾಲಿಟ್ಟು ಪಾಯಿಸ, ಅರಿಶಿನ ಎಲೆಲಿ ಮಾಡಿದ ಕೊಟ್ಟಿಗೆ, ಗೆಣಸಲೆ, ಎಳ್ಳು ಜೂಸು, ರಾಗಿ ಜೂಸು, ಅಪ್ಪ, (ಅಮ್ಮ ಇಲ್ಲೆ) ಆಹಾ... ಎಷ್ಟೊಂದು ಬಗೆ... ಮಾಣಿಗೆ ಆಶೆ ತಡೆಯ... ಎಂತಮಾಡುದು, ತಿಂಬಲೆ ಪುಟ್ಟಕ್ಕನ ಹೆದರಿಕೆ. ಕಾಟಂಗೋಟಿ ತಿನ್ನೆಡ ಹೇಳಿತ್ತಿದ್ದು. ಗೊಂತಾದರೆ ಗ್ರಾಚಾರ ಬಿಡ್ಸುಗು.

ವಸ್ತು ಪ್ರದರ್ಶನ ಕೂಡ ಇತ್ತು. ಭಾರೀ ಚೆಂದ ಇತ್ತಡ. ಮಾಣಿಗೆ ಅದರ್ಲೆಲ್ಲ ಇಂಟ್ರೆಶ್ಟಿಲ್ಲೆ. ಡೇನ್ಸು, ಮೇಜಿಕ್ಕು, ಆಟ, ನಾಟಕ, ನೇಮ, ಕೂಸುಗೊ, ಹೀಂಗಿಪ್ಪದರೆಲ್ಲಾ ನೋಡುದರ್ಲೇ ಕೊಶಿ.

ಎಂತದೇ ಹೇಳಿ. ಖರ್ಚು ಹತ್ತು ಕೋಟಿ ದಾಂಟಿರೂ ಕೆಲಸ ಭಾರೀ ಲಾಯಿಕ ಮಾಡಿತ್ತಿದ್ದವು. ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡ್ಸಿಕೊಡ್ತ ಪ್ರತಿಯೊಂದು ವಿಶಯಂಗಳೂ ಅಲ್ಲಿತ್ತು. ಸಂಸ್ಕೃತಿ ಅನಾಥ ಅಪ್ಪ ಕಾಲಲ್ಲಿ ಹೀಂಗಿಪ್ಪದೊಂದು ಜಾತ್ರೆ ಬೇಕಾವುತ್ತು. ನಾವು ಎಂತರ ಹೇಳಿ ನವಗೆ ನಾವೇ ನೆಂಪು ಮಾಡ್ಸಿಗೊಂಬಲೆ. ಎಂತ ಹೇಳ್ತಿ ಭಾವ?